Thursday, July 15, 2010

Hanasoge Photos




1 comment:

  1. ಶ್ರೀ ಶ್ರೀ ವಿಶ್ವನಂದನ ತೀರ್ಥ ಶ್ರೀಪಾದರಿಗೆ ಸಾಷ್ಟಾಂಗ ನಮನಗಳು.
    ನಾನು ಮುಳಬಾಗಿಲಿನವನು. ಈಗ ಬೆಂಗಳೂರು ನಿವಾಸಿ ಮತ್ತು ಕಾಲೇಜು ಪ್ರಾಧ್ಯಾಪಕನಾಗಿದ್ದೆ. ಈಚೆಗೆ ಮುಳಬಾಗಿಲಿಗೆ ಹೋಗಿದ್ದಾಗ ಅಲ್ಲಿ ತಾವು ಸಂಪಾದನೆ ಮಾಡಿ, ಅನುವಾದಿಸಿರುವ ಶ್ರೀ ಶ್ರೀಪಾದರಾಜರ “ ವಾಗ್ವಜ್ರೋಪನ್ಯಾಸ” ಪುಸ್ತಕವನ್ನು ನೋಡಿದೆ. ತಮ್ಮ ನಿರೂಪಣೆ ಮತ್ತು ಬರಹದ ಶೈಲಿ ನನಗೆ ಮುದ ತಂದಿತು. ಈ ಹಿಂದೆ ನಾನು ಮೈಸೂರಿನಲ್ಲಿ ಎಂಎ ವಿದ್ಯಾರ್ಥಿಯಾಗಿದ್ದಾಗ, ’ ವಾಗ್ವಜ್ರ’ ದ ದ ಏಕೈಕ ಹಸ್ತಪ್ರತಿಯನ್ನು ಒಆರ್ ಐ ನಲ್ಲಿ ನೋಡಿದ್ದೆ. ಅದರಲ್ಲಿ ಲಿಪಿಕಾರರು “ ಅವಧಾನಿಕುಲೋತ್ಪನ್ನ ಶ್ರೀಮಾಚಾರ್ಯಣುಸೂನುನಾ| ವಾಗ್ವಜ್ರಾಖ್ಯ ಮಹಾಗ್ರಂಥಂ ನಿರ್ಮಾತುಂ ತತರ್ಕಸಂಗ್ರಹಮ್| ಎಂದು ಒಕ್ಕಣಿಸಲಾಗಿತ್ತು. ಆಗ ಶ್ರೀ ಆರ್ ಜಜಿ. ಮಳಗಿ ಅವರು ಈ ಹಸ್ತಪ್ರತಿಯನ್ನು ನೋಡಲು ಅವಕಾಶವಿತ್ತಿದ್ದರು. ಇರಲಿ.
    ಈಗಿನ ಎರಡನೆಯ ಮುದ್ರಣದಲ್ಲಿ ’ ಶ್ರೀಮನ್ನ್ಯಾಯಸುಧಾ ಗ್ರಂಥಾತ್ ಕ್ರಿಯತೇತ್ವರ್ಥಸಂಗ್ರಹಃ | ವಾಗ್ವಜ್ರಾಖ್ಯಂ ಮಹಾಗ್ರಂಥಂ ನಿರ್ಮಾತುಂ ತರ್ಕಸಂಗ್ರಹಮ್| ಎಂದಿತ್ತು.
    ಶ್ರೀ ವ್ಯಾಸತೀರ್ಥರ ವವಿದ್ಯಾಗುರುಗಳಾದ ಶ್ರೀ ಶ್ರೀಪಾದರಾಜರು ಮಂಗಳ ಶ್ಲೋಕವಿಲ್ಲದೆ ಇದನ್ನು ಬರೆದರೋ ಅಥವಾ ಅವರ ಶಿಶ್ಯ ಸಂತತಿಯಲ್ಲಿ ಅವರ ಪಾಠಕ್ರಮದಂತೆ ಇದನ್ನು ಬರೆಯಲಾಗಿದೆಯೋ ಅರ್ಥವಾಗುವುದಿಲ್ಲ.
    ಮತ್ತೊಂದು ವಿಶೇಷವೆಂದರೆ ಇತ್ತೀಚಿನ ಪುಸ್ತಕದಲ್ಲಿ ’ ವಿಷ್ಣುತತ್ತ್ವವಿನಿರ್ಣಯದ ’ ಸಾರವನ್ನೂ ಉಪನ್ಯಾಸರೂಪದಲ್ಲಿ ಸಂಗ್ರಹಿಸಿ ಕೊಡಲಾಗಿದೆ. ಇದರ ಮೂಲ ಹಸ್ತಪ್ರತಿ ಎಎಲ್ಲಿ ದೊರೆಯಿತೋ ತಿಳೀಯದು. ನನ್ನ ಸಂದೇಹವೇನೆಂದರೆ ಶ್ರೀ ಜಯತೀರ್ಥರ ಶ್ರೀಮನ್ ನ್ಯಾಯಸುಧೆಗೆ ಟಿಪ್ಪಣಿ ಬರೆಯಲು ಸಮರ್ಥರಾಗಿದ್ದ ವಿದ್ವತ್ಕವಿ, ದಾರ್ಶನಿಕ ಶ್ರೀಪಾದರಾಜರು ತಮ್ಮ, ಮತ್ತು ಯಾವ ಪೂರ್ವ ಸೂರಿಗಳ ಬಗ್ಗೆಯೂ ಏನೂ ಪ್ರಸ್ತಾಪಿಸದೆ, ಮಂಗಳಪದ್ಯವಿಲ್ಲದೆ, ಉಪೋದ್ಘಾತಾದೈಗಳೀಲ್ಲದೆ. ಆರಾಧ್ಯ ದೈವ ಶ್ರೀಗೋಪೀನಾಥ- ರಂಗವಿಟ್ಠಲ- ಹಯವದನರನ್ನು ಸ್ಮರಿಸುವ ಒಂದು ಅನುಷ್ಟುಭ್ ಶ್ಲೋಕವನ್ನೂ ಗ್ರಂಥಾದಿಯಲ್ಲಿ ಬರೆಯದೆ ಇರುವುದು ಆಶ್ಚರ್ಯವೇ ಸರಿ.
    ಈಗಿನ ಪುಸ್ತಕ ನಿರ್ದುಷ್ಟವಾಗಿದ್ದರೂ, ಆದಿ- ಮಧ್ಯಾಂತಗಳಲ್ಲಿ ಯಾವ ಗುರುಗಳ ಉಲ್ಲೇಖವಾಗಲೀ, ಶ್ರೀಜಯತೀರ್ಥರು ಬಳಸಿರುವ ವಾಕ್ಯ-ನ್ಯಾಯ ಸರಣಿಯನ್ನಾಗಲಿ ಇಲ್ಲಿ ಸಕ್ರಮವಾಗಿ ವಿವರಿಸದೆ ಬಿಟ್ಟಿರುವುದಕ್ಕೆ ಏನು ಹೇಳಬೇಕೋ ಅರ್ಥವಾಗುವುದಿಲ್ಲ. ಈ ಬಗ್ಗೆ ಪ್ರಾಜ್ಞರಾದ ತಾವು ಎರಡು ಸಾಲು ಉತ್ತರ ಬರೆದಲ್ಲಿ ಧನ್ಯನಾಗಿರುವೆ. ಮತ್ತೊಮ್ಮೆ ನಮಸ್ಕಾರಗಳು.
    ತಾಯಲೂರು ಪದ್ಮನಾಭ ರಾವ್.
    ೭೪/ಎ, ೧೦ನೇ ಮುಖ್ಯ ರಸ್ತೆ, ೩ನೇ ಕ್ರಾಸು

    ReplyDelete